ಪ್ರಮೋದ್ ಕಿರಾಡಿ ಶೆಟ್ಟಿ( ಚಿತ್ರರಂಗದಲ್ಲಿ ಪ್ರಮೋದ್ ಶೆಟ್ಟಿ ಎಂದು ಪರಿಚಿತರು) ಇವರು ಕನ್ನಡ ನಟ ಮತ್ತು ಚಲನಚಿತ್ರ ನಿರ್ಮಾಪಕರು. ಇವರು ಬಹುಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ. ಉಳಿದವರು ಕಂಡಂತೆ (2014), ಕಿರಿಕ್ ಪಾರ್ಟಿ (2016) ಮತ್ತು ಅವನೇ ಶ್ರೀಮನ್ನಾರಾಯಣ (2019) ಚಿತ್ರಗಳಲ್ಲಿ ನಟಿಸಿದ್ದಾರೆ. == ವೈಯಕ್ತಿಕ ಜೀವನ == ಪ್ರಮೋದ್ ಶೆಟ್ಟಿ ಅವರು ನಟಿ ಸುಪ್ರೀತಾ ಶೆಟ್ಟಿ ಅವರನ್ನು 2010 ರಲ್ಲಿ ವಿವಾಹವಾಗಿದ್ದು ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಸುಪ್ರೀತಾ ಶೆಟ್ಟಿ ಅವರು ಕೂಡ ಕನ್ನಡ ಕಿರುತೆರೆಯಲ್ಲಿ ಹೆಸರಾಂತ ನಟಿಯಾಗಿದ್ದಾರೆ. ಪೋಷಕ ಪಾತ್ರಗಳಲ್ಲಿನ ನಟನೆಗೆ ಹೆಸರುವಾಸಿ ಆಗಿರುವ ಇವರು ಸಹಸ್ರಾರು ಎಪಿಸೋಡ್‌ ಗಳಲ್ಲಿ ನಟಿಸಿ ಅಗಣಿತ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ನಮ್ಮಮ್ಮ ಸೂಪರ್ ಸ್ಟಾರ್‌ ರಿಯಾಲಿಟಿ ಶೋನಲ್ಲಿ ಮಗಳೊಂದಿಗೆ ಪಾಲ್ಗೊಂಡಿದ್ದರು. == ಆರಂಭಿಕ ಜೀವನ == ಹೋಟೆಲ್‌ ಉದ್ಯಮಿ ರಾಜು ಶೆಟ್ಟಿ ಹಾಗೂ ದೇವಕಿ ದಂಪತಿಯ ಕಿರಿಯ ಪುತ್ರರಾದ ಪ್ರಮೋದ್‌ ಶೆಟ್ಟಿ ಜನಿಸಿದ್ದು ಉಡುಪಿಯಲ್ಲಿ. ಸಹೋದರಿ ಪಲ್ಲವಿ ಶೆಟ್ಟಿ ವೈದ್ಯರಾಗಿದ್ದರೆ, ಸೋದರ ಪ್ರಸನ್ನ ಶೆಟ್ಟಿ ಉದ್ಯಮಿಯಾಗಿದ್ದಾರೆ. ಪ್ರಮೋದ್‌ ಶೆಟ್ಟಿ ಅವರ ಪ್ರಾಥಮಿಕ ಶಿಕ್ಷಣ ನಳಂದ ಹಾಗೂ ಮದರ್‌ ತೆರೆಸಾ ಶಾಲೆಯಲ್ಲಿ ಪಡೆದಿದ್ದಾರೆ. ೫ನೇ ತರಗತಿಯಿಂದ ಪದವಿವರೆಗೂ ಬಿಹೆಚ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದಾರೆ. ಬಿಹೆಚ್‌ಎಸ್‌ ಶಿಕ್ಷಣ ಸಂಸ್ಥೆ ಪ್ರಮೋದ್‌ ಅವರ ವ್ಯಕ್ತಿತ್ವದ ಮೇಲೆ ಬಹಳ ಪರಿಣಾಮ ಬೀರಿದೆ. ಪ್ರಮೋದ್‌ ಅವರ ವೃತ್ತಿ ಜೀವನ ರೂಪಿಸಿದ ರಂಗಸೌರಭ ಅನ್ನುವ ಕಾಲೇಜು ನಾಟಕ ತಂಡ ಇದ್ದದ್ದು ಇದೇ ಬಿಹೆಚ್‌ಎಸ್‌ ಕಾಲೇಜಿನಲ್ಲಿಯೇ. == ಚಲನಚಿತ್ರಗಳು == === ನಟನೆ === == ಪ್ರಶಸ್ತಿಗಳು == ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ 2017 – ಕಿರಿಕ್ ಪಾರ್ಟಿಗಾಗಿ ಅತ್ಯುತ್ತಮ ಹಾಸ್ಯನಟನಾಗಿ ನಾಮನಿರ್ದೇಶನಗೊಂಡಿದೆ. ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ 2019 - ಮುಂದಿನ ನಿಲ್ದಾಣ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟನಾಗಿ ನಾಮನಿರ್ದೇಶನಗೊಂಡಿದೆ ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ 2021 - ಚೊಚ್ಚಲ ಪಾತ್ರದಲ್ಲಿ ಒಂದು ಶಿಕಾರಿಯ ಕಥೆಯಲ್ಲಿ ಅತ್ಯುತ್ತಮ ನಟನಾಗಿ ನಾಮನಿರ್ದೇಶನಗೊಂಡಿದೆ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==